top of page

ಷೋ ಮಿ ದ ರಿಸಲ್ಟ್!

"ಡು ವಾಟೆಹ್ವರ್ ಯು ವಾಂಟ್. ಐ ವಾಂಟ್ ಟು ಸಿ 50% ಇನ್ಕ್ರೀಸ್ ಇನ್ Q3 ಸೇಲ್ಸ್ ಫಿಗರ್ಸ್" ಎಂದು ಎಮ್.ಸಿ. ದೇಶಪಾಂಡೆ ತನ್ನ ಎಮ್.ಸಿ.ಡಿ ಕಂಪೆನಿಯ ಸೇಲ್ಸ್ ಹೆಡ್ ಓ.ಸಿ ಅಗರ್ವಾಲ್ಗೆ ತುಪುಕ್ ಅಂತ ಉಗಿದು ಕಳಿಸುತ್ತಾನೆ.


ಅರ್ಧಗಾಳಿ ಹೋದ ಪುಗ್ಗದ ಹಾಗೆ ಜೋತುಬಿದ್ದ ಮುಖದೊಂದಿಗೆ ಅಗರ್ವಾಲನು ಎಮ್.ಡಿ ಯ ಕ್ಯಾಬಿನ್ ನಿಂದ ಹೊರಹೋಗಲು ಬಾಗಿಲನ್ನು ತೆಗೆಯುತ್ತಿದ್ದಂತೆ ಮೌಂಟ್ ಎವರೆಸ್ಟ್ ಬೆಟ್ಟವನ್ನೇ ಅಲ್ಲಾಡಿಸಿ ಬಂದ ಹಾಗೆ ಊಸರವಳ್ಳಿಯಂತೆ ಮುಖದ ಎಕ್ಸ್ ಪ್ರೆಷನ್ನನ್ನು ಬದಲಾಯಿಸಿಕೊಳ್ಳುತ್ತ ತನ್ನ ಏಪ್ಯಾಕ್ ಟೀಮ್ನ ಕಡೆಗೆ ಹೆಜ್ಜೆ ಇಡುತ್ತಾನೆ.


ಏಪ್ಯಾಕ್ ಟೀಮ್ ಕ್ಯೂಬಿಕಲ್ನಲ್ಲಿ ಎಸ್.ಎಮ್. ಇಂದಿರಳೊಂದಿಗೆ ಫ್ಲರ್ಟ್ ಮಾಡುತ್ತ ಕಂಪ್ಯುಟರ್ ಡೆಸ್ಕ್ ಮೇಲೆ ಕುಳಿತು ಎಂ.ಡಿಯ ಕ್ಯಾಬಿನ್ ಕಡೆಗೆ ಆಗಾಗ ಕಣ್ಣಾಡಿಸುತ್ತಿದ್ದ ಆರ್. ಸಿ. ಕೃಷ್ಣನು ತನ್ನ ಬಾಸ್ನ ಗೆಲುವಿನ ಮುಖ ನೋಡಿ “ಒಳ್ಳೆ ಅಪ್ರಿಷಿಯೇಷನ್ ಸಿಕ್ಕಿರ್ಬೇಕು. ಈ ಸಲ ನನ್ನ ಸಂಬಳದಲ್ಲಿ 50% ಹೈಕ್ ಪಕ್ಕಾ” ಎಂದು ಮನಸ್ಸಿನಲ್ಲಿಯೇ ಖುಷಿಪಡುತ್ತಾನೆ. ಅಗರ್ವಾಲನು ಕ್ಯೂಬಿಕಲ್ ಕಡೆಗೆ ಬರುತ್ತಿದ್ದಂತೆ ಕೃಷ್ಣನು "ಓ.ಸಿ ಬಂದ" ಎಂದು ಇಂದಿರಗೆ ಕೇಳಿಸುವ ಹಾಗೆ ಗೊಣಗುತ್ತ ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ.


ಅಗರ್ವಾಲ್: ಗೈಸ್! ಎನಿ ಪ್ಲಾನ್ಸ್ ಫಾರ್ ಡಿನ್ನರ್ ಟುನೈಟ್? ಷಲ್ ವಿ ಗೊ ಟು ರಾಷ್ಠ್ರಕೂಟಾಸ್ ಆಂಡ್ ಹಾವ್ ದೊಣ್ಣೆ ಬಿರಿಯಾನಿ?


ಕೃಷ್ಣ: ಬಾಸ್! ಇಟ್ಸ್ ನಾಟ್ ದೊಣ್ಣೆ ಬಿರಿಯಾನಿ. ಇಟ್ ಇಸ್ ದೊನ್ನೆ ಬಿರಿಯಾನಿ.


ಮನಸ್ಸಿನಲ್ಲಿ ಅಗರ್ವಾಲನು "ನಿನಗೆ ಇದೆ ಇವತ್ತು. ಬಿರಿಯಾನಿ ಜೊತೆಗೆ ಬೀಸ್ತಿನಿ. ಆವಾಗ ಗೊತ್ತಾಗುತ್ತೆ ದೊಣ್ಣೆನ ಅಥವಾ ದೊನ್ನೆನಾ ಅಂತ"


ಇಂದಿರ: ಶೂರ್ ಸರ್. ಐ ಆಮ್ ಇನ್. ವೈ ಕಾಂಟ್ ವಿ ಟ್ರೈ 'ಗಿರ್ಗಿಟ್' ನಿಯರ್ ಥರ್ಡ್ ಮೈನ್ ರೋಡ್. ವಿ ಕ್ಯಾನ್ ಹಾವ್ ಸಮ್ ಡ್ರಿಂಕ್ಸ್.


ಅಷ್ಟರಲ್ಲಿ ಎಮ್.ಸಿ. ದೇಶಪಾಂಡೆ ತನ್ನ ಕ್ಯಾಬಿನ್ ಬಾಗಿಲನ್ನು ತೆಗೆದು ಮನೆಗೆ ತೆರಳುತ್ತಾನೆ. ಇದನ್ನು ಗಮನಿಸಿದ ಅಗರ್ವಾಲನು.


ಅಗರ್ವಾಲ್: ಎಸ್. ದ್ಯಾಟ್ ಸೌಂಡ್ಸ್ ಬೆಟ್ಟರ್. ಲೆಟ್ಸ್ ಕ್ಯಾಚಪ್ ಎಟ್ 8pm ನಿಯರ್ 3ರ್ಡ್ ಮೈನ್ ರೋಡ್. ಸಿ.ಯು ಬೋತ್!

ಅಗರ್ವಾಲನು ತನ್ನ ಲಾಪ್ ಟಾಪ್, ಚಾರ್ಜರ್ ಅನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಮನೆಗೆ ಹೊರಡುತ್ತಾನೆ. ಇವನು ಹೋಗುತ್ತಿದ್ದಂತೆ 5-10 ನಿಮಿಷದಲ್ಲಿ ಕೃಷ್ಣ ಹಾಗೂ ಇಂದಿರ ಹೊರಡುತ್ತಾರೆ.


ಕೃಷ್ಣ: ಇಫ್ ಯು ಡೊಂಟ್ ಮೈಂಡ್, ಬರ್ತಿಯಾ. ಮನೆಗೆ ಡ್ರಪ್ ಮಾಡ್ತಿನಿ. ಆಸ್ ಯು ನೋ, ಐ ಆಲ್ವೇಸ್ ಕ್ಯಾರಿ ಟು ಹೆಲ್ಮೆಟ್ಸ್!


ಇಂದಿರ: ಶುರ್. ವೈನಾಟ್. ನಿಮ್ ಬೈಕ್ ಅಲ್ಲಿ ಹೋಗೊದೆ ಒಂದು ಮಜಾ!


ಬೆಂಗಳೂರಿನ ಟ್ರಾಫಿಕ್ಗೆ ಬೈಯುತ್ತ, ಆಗಾಗ ಬ್ರೇಕ್ ಹಾಕುತ್ತ, ಬಾಸ್ ಬಗ್ಗೆ ಕಂಪನಿ ಬಗ್ಗೆ ಮಾತಾಡುತ್ತ ಹೋಗುತ್ತಾರೆ. ಇಂದಿರಳ ಮನೆ ಹತ್ತಿರ ಬರುತ್ತಿದ್ದಂತೆ...


ಇಂದಿರ: ಕೃಷ್ಣ. ಇಲ್ಲಿಯೆ ನಿಲ್ಲಿಸಿ. ಐ ವಾಂಟ್ ಟು ಬೈ ಸಮ್ ಸ್ಟಫ್ಸ್ ಫಾರ್ ಹೋಮ್.


ಕೃಷ್ಣ: ಶೂರ್.


ತನ್ನ ಮನೆಯಿಂದ ಅರ್ಧ ಕಿ.ಮಿ. ದೂರದಲ್ಲಿಯೇ ಬೈಕ್ ನಿಂದ ಇಳಿದು, ಕೃಷ್ಣನಿಗೆ ಹೆಲ್ಮೆಟ್ ವಾಪಸ್ ಕೊಟ್ಟು. ಬಾಯ್ ಎಂದು ನಡೆಯುತ್ತ ಮನೆ ಕಡೆಗೆ ಹೆಜ್ಜೆ ಇಡುತ್ತಾಳೆ.


ree

ಕೃಷ್ಣ: ಸೀಯು ಅಟ್ 8. ಬಾಯ್!


ಎಂದು ನಿಂಜಾ ಬೈಕ್ನ ಆಕ್ಸೆಲರೇಟರ್ ಜೋರಾಗಿ ಕೊಡುತ್ತಾ, ಸೈಲೆನ್ಸ್‌ಸರ್ ನಿಂದ ಶಬ್ಧ ಮಾಡುತ್ತ ಹೊರಡುತ್ತಾನೆ.

ಇಂದಿರಳು ವ್ಯಾನಿಟಿ ಬ್ಯಾಗ್ನಿಂದ ಇಯರ್ ಪಾಡ್ಸ್ ಅನ್ನು ಕಿವಿಯಲ್ಲಿ ಹಾಕಿ, ತನ್ನ ಐ ಪೋನ್ ನಿಂದ ‘ja...’ ಎಂದು ಟೈಪ್ ಮಾಡುತ್ತಾಳೆ. ‘ಜಾಕ್ ಡಿ.’ ಹೆಸರು ಕಾಣಿಸುತ್ತಿದಂತೆ ಹೆಸರಿನ ಮೇಲೆ ಒತ್ತಿ ಜಾಕ್ಗೆ ಕರೆ ಮಾಡಿ ಫೊನ್ ಅನ್ನು ಬ್ಯಾಗಿನಲ್ಲಿ ಇಟ್ಟು ನಡೆಯುತ್ತಾಳೆ.


ಇಂದಿರ: ಹು.......... ಎಸ್........... ವಾಟ್ ಆರ್ ಯು ಡೂಯಿಂಗ್!........ ಹ್ಞ್…..... ಒಕೆ ಒಕೆ... ಟುಕ್ ಓಲಾ........... ಹ್…….. ಯಾ…..... ನೋ..... ಇಟ್ ವಾಸ್ ಎಸ್ಟರ್ ಡೇ............ ಹ ಹಾ... ಗ್ರೀನ್.............ಒಕೆ...... ಐ ಆಮ್ ನಿಯರಿಂಗ್ ಟು ಹೋಮ್.…..ಡ್ಯಾಡ್ ಈಸ್ ಔಟ್ ಸೈಡ್. ಸೀ ಯು... ಬಾಯ್.


ಇಂದಿರಳ ಅಪ್ಪ ಪುಂಗಿ ಜಾನ್ ಮನೆಯ ಅಂಗಳದಲ್ಲಿರುವ ಗಿಡಗಳಿಗೆ ನೀರುಣಿಸುತ್ತ…


ಪಿ.ಜೆ: ಏನ್ ಬೆಂಗಳೂರೋ ಎನೋ ಗೊತ್ತಿಲ್ಲ. ಅಪ್ಪನ ದುಡ್ಡಲ್ಲಿ ಇಂಪೋರ್ಟೆಡ್ ಬೈಕ್ ತಗೋಳೋದು. ಝರ್........ ಅಂತ ಸೌಂಡ್ ಮಾಡ್ಕೊಂಡ್ ಜನರಿಗೆಲ್ಲ ತೊಂದರೆ ಕೊಡೊದು. ಯಾವಾಗ್ ಉದ್ಧಾರ ಆಗ್ತಾರೋ. R.T.O ದವರಿಗಾದ್ರು ಬುದ್ಧಿ ಬೇಡ್ವಾ... ಇಂತಾ ಬೈಕ್ ಗೆಲ್ಲಾ ಹೇಗೆ ಅಪ್ರೋವಲ್ ಕೊಡ್ತಾರೆ! ಡಿಸ್ಗಸ್ಟಿಂಗ್!


ಇಂದಿರ ಮನೆ ಒಳಗೆ ಹೆಜ್ಜೆ ಇಡುತ್ತಿರುವಾಗ ಪಕ್ಕದ ಮನೆಯ ಅಮೃತ ಗ್ಯಾಲರಿ ಇಂದ ಹೊರಗೆ ಬರುತ್ತಾಳೆ. ಇದನ್ನು ಗಮನಿಸಿದ ಪಿ.ಜೆ “ಏನ್ರೀ ಅಮೃತ ಅವ್ರೆ. ವೇರ್ ಇಸ್ ಶಿವು. ಮನೇಲಿದ್ದಾರ ಅಥವಾ ಕುದ್ರೆ ಹಿಂದೆ ಹೋಗಿದ್ದಾರಾ? ರಾತ್ರಿ ನಮ್ ಮನೆಗೆ ಊಟಕ್ಕೆ ಬನ್ನಿ. ಶಿವು ಜೊತೆ ಇಂಪಾರ್ಟೆಂಟ್ ಟಾಪಿಕ್ ಬಗ್ಗೆ ಡಿಸ್ಕಶ್ಸನ್ ಮಾಡ್ಬೇಕು.


ಅಮೃತ: ಆಯಿತು. ಅವರಿಗೆ ಹೇಳ್ತಿನಿ. ಏನ್ ಸ್ಪೆಷಲ್ ಮಾಡಿದ್ದಾರೆ ಮಿಸ್ಸೆಸ್ ಪಿ.ಜೆ ಯವರು?


ಪಿ.ಜೆ: ಅದೇನೋ ಗೊತ್ತಿಲ್ಲ ನೀವೇ ಕೇಳ್ಕೊಳಿ.


ಮನೆ ಒಳಗಿಂದ ಇಂದಿರ ಅಮ್ಮನಿಗೆ "ಅಪ್ಪ ಅವರ್ ಡೌವ್ ಜೊತೆ ಏನೋ ಪುಂಗ್ತವರೆ. ರಾತ್ರಿ ಕರ್ದಿದ್ದಾರೆ! ಊಟಕ್ಕೆ! ಜೊತೆಗೆ ಅಂಕಲ್ ಇಲ್ಲಪ್ಪ ಅವರನ್ನು ಕರ್ಕೊಂಡ್ ಬರಬೇಕಂತೆ ಅಂತ ಹೇಳ್ತಿದ್ದಾರೆ"


ಮಿಸೆಸ್ಸ್.ಪಿ.ಜೆ: ನನ್ ಜೀವ್ನ ಪೂರ್ತಿ ಇದೇ ಆಯಿತು. ಯಾರ್ ಯಾರ್ನೋ ಮನೆಗೆ ಕರ್ಯೋದು ಅಡುಗೆ ಮಾಡಿ ಹಾಕೋದು. ಇವ್ರು ಕುಡ್ಕೊಂಡು ಕೈ, ತಾವರೆ, ದಳ ಅಂತ ದೇಶ ಉದ್ದಾರ ಮಾಡೋ ಹಾಗೆ ಮಾತಾಡೋದು.


ಇಂದಿರ: ಅಮ್ಮ. ಆಫೀಸ್ ಅಲ್ಲಿ ಬಾಸ್ ಡಿನ್ನರ್ ಗೆ ಕರ್ದಿದ್ದಾರೆ. ನನಗೆ ಏನು ಮಾಡಿಡ್ಬೇಡ.


ಮಿಸೆಸ್ಸ್.ಪಿ.ಜೆ: ಹೋಗು! ನೀನು ಹೋಗ್ಬಿಡು. ನನ್ ಕೇಳೋರು ಯಾರು ಇಲ್ಲ.


ಮನೆಯಲ್ಲಿ ಜೂಟಾಟ ನಡಿತ್ತಿದ್ದ ಹಾಗೆ ಪಿ.ಜೆ ಕಿಚನ್ನ crockery unit ಇಂದ ಒಂದು ಫುಲ್ ಎಂ.ಸಿ.ಡಿ ಬಾಟಲ್ ತೆಗದು ಒರಸಿ ಡೈನಿಂಗ್ ಟೇಬಲ್ ಮೇಲೆ ಇಡುತ್ತಾನೆ. ಸಂಜೆ 7:30 ಆಗ್ತಿದ್ಹಾಗೆ, ಇಂದಿರಾ 'ಗಿರ್ಗಿಟ್' ಕಡೆಗೆ ಓಲ ಬುಕ್ ಮಾಡಿ ಹೊರಡುತ್ತಾಳೆ. ದಾರಿ ಅಲ್ಲಿ ಹೋಗುತ್ತ ಅದೇ ರಾಗ ಅದೇ ತಾಳ... ಹು..... ಮ್… ಹಾ... ಯಾ….... ರೆಡ್...... ಯಾ ಯಾ … ಹೂಂ.......... ಹ್.. ಓಕೆ.. ಬಾಯ್.

ಗಿರ್ಗಿಟ್ ನಲ್ಲಿ ಕೃಷ್ಣ ಹಾಗು ಅಗರ್ವಾಲ್ ಇಬ್ಬರು ಒಂದ್ ಟೇಬಲ್ ನಲ್ಲಿ ಕುಳಿತು ಒಂದೊಂದು ಲಾರ್ಜ್ ಪಾ.ಜಾ ಸಿಂಗಲ್‌ ಮಾಲ್ಟ್ ಆರ್ಡರ್ ಮಾಡಿ ಫಿಂಗರ್ ಚಿಪ್ಪ್ಸ್ ಅನ್ನು ಮದ್ಯದ ಮಧ್ಯ ತಿನ್ನುತ್ತಾ ಮಾತನಾಡುತ್ತಿರುವಾಗ ಇಂದಿರ ಬರುತ್ತಾಳೆ. ಇಂದಿರ ತನಗೆ ಒಂದು LIIT ಮತ್ತು ಚೀಸ್ ಬಾಲ್ಸ್ ಆರ್ಡರ್ ಮಾಡಿ ಎಲ್ಲರೂ ಮಾತಿಗೆ ಇಳಿಯುತ್ತಾರೆ. ಎರಡೆರಡು ಪೆಗ್ ಒಳಗೆ ಹೋದ ನಂತರ…


ಅಗರ್ವಾಲ್: ಗೈಸ್. ಐ ಗಾಟ್ ಫಿವ್ ಇಂಪಾರ್ಟೆಂಟ್ ಅಪ್ಡೇಟ್ಸ್ ಫಾರ್ ಯು ಬೋತ್. ಎಂ.ಡಿ ನಮ್ಮ ಸೇಲ್ಸ್ ಟಾರ್ಗೆಟ್ ಅನ್ನು Q3 ಯಲ್ಲಿ ಡಬಲ್ ಮಾಡಿದ್ದಾರೆ. ಇಟ್ಸ್ ನವ್ 100% ಮೊರ್ ವಿ ಹಾವ್ ಟು ವರ್ಕ್. ನಮ್ಮ ಫ್ಲಾಗ್ಶಿಪ್ ಪ್ರಾಡಕ್ಟ್ McD ನ ಜನ ಡಬಲ್ ಕುಡಿಬೇಕು. ಆಗ ವೀ ವಿಲ್ ರೀಚ್ ಅವರ್ ಟಾರ್ಗೆಟ್.


ಅಗರ್ವಾಲನ ದೊಣ್ಣೆ ಏಟಿಗೆ ಕೃಷ್ಣನ ನಶೆ 50% ಇಳಿಯುತ್ತಿದ್ದಂತೆ….


ಅಗರ್ವಾಲ್: ಈ ವರ್ಷ ನೀವ್ ಇಬ್ಬರು ಹೈಕ್ ಎಕ್ಸ್ ಪೆಕ್ಟ್ ಮಾಡ್ಬೇಡಿ. ಆಸ್ ಯು ನೊ ದೇಶದ ಇನ್ಫ್ಲೇಷನ್ ರೇಟ್ ಇಸ್ ಅಟ್ 6.8%. ಇನ್ ದಿಸ್ ಸಿನಾರಿಯೋ ವಿ ಡೊಂಟ್ ಗೆಟ್ ಹೈಕ್. ಬಟ್ ಐ ಹ್ಯಾವ್ ಕಾನ್ವಿಂಸ್ಡ್ MD ಟು ಗಿವ್ ಯು ಬೋತ್ ಅಟ್ಲೀಸ್ಟ್ ಎ ಫ್ಲಾಟ್ ಹೈಕ್. ದಟ್ ಇಸ್ ಅರೌಂಡ್ 3-4%.


ಇಂದಿರ: ಇಟ್ಸ್ ಓಕೆ ಸರ್! ನೀವು ಹೈಕ್ ಹೇಳ್ತಿದ್ಹಾಗೆ ನೆನಪಿಗೆ ಬಂತು. ಶಲ್ ವಿ ಗೋ ಫಾರ್ ಕುದ್ರೆಮುಖ ಹೈಕಿಂಗ್ ದಿಸ್ ವೀಕೆಂಡ್? ಮೈ ಫ್ರೆಂಡ್ ಜಾಕ್ ಆರ್ಗನೈಸಸ್ ದೀಸ್ ಕೈಂಡ್ಸ್ ಆಫ್ ಆಕ್ಟಿವಿಟೀಸ್. ಐ ವಿಲ್ ಟಾಕ್ ಟು ಹಿಮ್ ಇಫ್ ಯು ಬೋತ್ ಆರ್ ಇಂಟರೆಸ್ಟೆಡ್.


ಕೃಷ್ಣ ಮನಸ್ಸಲ್ಲಿ ತನ್ನೊಳಗೆ “ಇಲ್ಲಿ ಪೆಟ್ರೋಲ್ ಹಾಕಕ್ಕೇ ದುಡ್ಡಿಲ್ಲ ಅಂತ ನಾನ್ ಚಿಂತೆ ಮಾಡ್ತಿದ್ರೆ ಹೈಕಿಂಗ್ ಅಂತೆ. ಅದ್ಬೇರೆ ಯಾವನೊ ಜೊತೆ ಇವಳು ನಮ್ನಾ ಕರ್ಕೊಡ್ ಹೊಗ್ತಾಳಂತೆ. ಇದ್ರ ಬದ್ಲು ಹೆಂಡ್ತಿ ಜೊತೆ ತಿಮ್ಮಪ್ಪನ ದರ್ಶನ ಮಾಡಿದ್ರೆ ಅವ್ನ ಆಶೀರ್ವಾದದಿಂದ ಬೇರೆ ಕಡೆ ಕೆಲಸ ಆದ್ರೂ ಹುಡ್ಕಬಹುದು”


ಅಗರ್ವಾಲ್: ಷಲ್ ವಿ ಗಿವ್ ಅವರ್ ಬೆಸ್ಟ್ ದಿಸ್ ಕ್ವಾರ್ಟರ್ ಗೈಸ್?


ಕೃಷ್ಣ ಮತ್ತೆ ಮನಸ್ಸಿನಲ್ಲಿ “ಲೇ. ಓಸಿ ನನ್ನ ಮಗನೇ. ನೆಟ್ಗೆ ಕನ್ನಡ ಮಾತಾಡೊ ಗುಬಾಲ್! ಕ.ಹೋ.ಸ ನ ಕರ್ಕೋಂಡ್ ಬಂದ್ ಆಪೀಸ್ನ್ನೆಲ್ಲ ಒಡ್ದಾಹಾಕ್ ಬೇಕು.” ಅಗರ್ವಾಲ್ ಗೆ ಬೈಯ್ಯುತ್ತಿರುತ್ತಾನೆ. ಅಷ್ಟರಲ್ಲಿ ಮತ್ತೆ…


ಅಗರ್ವಾಲ್: “ಐ ನೋ ಕೃಷ್ಣ ಹ್ಯಾಸ್ ಬೀನ್ ಡೂಯಿಂಗ್ ಗ್ರೇಟ್ ಜಾಬ್. ಹೀ ಹ್ಯಾಸ್ ಬೀನ್ ಆಲ್ವೇಸ್ ಎ ಗ್ರೇಟ್ ಸೇಲ್ಸ್ ಮ್ಯಾನ್ ಇನ್ ದಿಸ್ ಇಂಡಸ್ಟ್ರೀ. ಲಕ್ಕಿ ದಟ್ ಯು ಆರ್ ವಿದ್ ಮಿ ಕೃಷ್ಣ. ಛೀಯರ್ಸ್ ಅಗೈನ್.


ಕೃಷ್ಣ (ಮುಗುಳ್ನಗುತ್ತ): ತಾಂಕ್ಸ್ ಬಾಸ್! ಯು ಹಾವ್ ಬೀನ್ ದ ಬೇಸ್ಟ್ ಬಾಸ್ ಎವರ್!


ಅಗರ್ವಾಲ್: ಆಲ್ಸೋ ಯು, ಇಂದಿರಾ. ಯು ಶುಡ್ ಫೋಕಸ್ ಆನ್ ಓ.ಸಿ. ಇನ್ ನೆಕ್ಸ್ಟ್ ಕ್ವಾರ್ಟರ್. ಲೆಟ್ಸ್ ಚೇಂಜ್ ದಿ ನಂಬರ್ಸ್ ದಿಸ್ ಟೈಮ್. ಚೀಯರ್ಸ್ ಟು ಅಸ್! ಟುಡೇಸ್ ಫುಡ್ ಆಂಡ್ ಡ್ರಿಂಕ್ಸ್ ಇಸ್ ಆನ್ ಮಿ. ಡೋಂಟ್ ವರಿ. ಮೇಕ್ ಇಟ್ ಲಾರ್ಜ್! ಖೂಬ್ ಜಮೇಗ ರಂಗ್ ಜಬ್ ಮಿಲ್ ಬೈಟೆಂಗೆ ತೀನ್ ಯಾರ್! ಆಪ್, ಮೆ, ಔರ್ 4th ಕ್ವಾರ್ಟರ್.


***

 
 
 

Comments


bottom of page