top of page

ಮದ್ಯ ಪ್ರಿಯರು!

ಕಂಠೀರವ ಸ್ಟುಡಿಯೋ ಪಕ್ಕ ಇರೋ ಮಹಾರಾಣಿ ಬಾರ್ ನಲ್ಲಿ ಮೂರು ಮೂರು ಬಾಟಲ್ ಅಲ್ಟ್ರಾ max ಕುಡಿದು ಅಮಲು ಜಾಸ್ತಿ ಆಗಿ ಹೊರಗೆ ಬಂದು ಫುಟ್ಪಾತ್ ಮೇಲೆ ಕೂತ ಕೃಷ್ಣ ತನ್ನ ಮೊಬೈಲ್ ತೆಗೆದು ರಂಗನಿಗೆ ಕಾಲ್ ಮಾಡಿದ. ಜೊತೆಲಿದ್ದ ಬಸ್ಯ ಅವನ ಪಕ್ಕ ಕೂತು ಆಕಾಶದಲ್ಲಿದ್ದ ನಕ್ಷತ್ರಗಳೆಲ್ಲ ಎಲ್ಲಿ ಮಾಯವಾದವು ಎಂದು ಯೋಚಿಸುವಷ್ಟರಲ್ಲಿ...


ree

ಕೃಷ್ಣ ಮೊಬೈಲ್ ನಲ್ಲಿ "ಮಚ್ಚಾ ನಾಳೆ ಬೆಳ್ಗೆ ಒಂದ್ ಡೀಲ್ ಮುಗಿಸ್ಬೇಕು. ಅವ್ನಯ್ಯನ್, ನಮ್ ಹುಡ್ಗಿಗೆ ಡ್ರಾಪ್ ಮಾಡಿದ್ನಲ್ಲ ಮೊನ್ನೆ, ಅವ್ನ ಅಡ್ರೆಸ್ ಸಿಕ್ಕೈತೆ ಮಗ. ನಾಳೆ ಬೆಳಿಗ್ಗೆ ಅವನ್ ಗಾಡಿ ಸ್ಟಾರ್ಟ್ ಆಗ್ಬಾರ್ದು ಮಗ. ಅವ್ನ ಎತ್ಬಿಡೋದೇ. ನೀನ್ ರೇಜರ್ ತಗೊಂಡ್ ಬಾ, ನಮ್ ಜೊತೆ ಬ್ಲೇಡ್ ಇರ್ತಾನೆ. ಹೆಲ್ಮೆಟ್ ಹಾಕೊಂಡ್ ಬಾ ಮಗ ಮರಿಬೇಡ. ಬೆಳಿಗ್ಗೆ 6 ಗಂಟೆಗೆ ಮಿಸ್ ಕಾಲ್ ಹಾಕ್ತೀನಿ. ಮಗ ಮರೀಬೇಡ ಲೆ. ನಾಳೆ ಅವ್ನ ಎತ್ತಿದ್ಮೇಲೆ, ನಮ್ನ ಪೊಲೀಸ್ ಟ್ರ್ಯಾಕ್ ಮಾಡಿ ಅರೆಸ್ಟ್ ಮಾಡಿದ್ರೆ ಏನು ಹೆದ್ರ್ ಬೇಡ. ನಿನ್ ಹೆಸ್ರು ರೇಜರ್ ರಂಗ ಅಂತ ಹೇಳು. ನಾನು ಕೂರುಪ್ ಕೃಷ್ಣ ಅಂತ ಹೇಳ್ತೀನಿ. ಇವ್ನಿಗೆ ಬ್ಲೇಡ್ ಬಸ್ಯ ಅಂತ ಹೇಳಕ್ ಹೇಳ್ತೀನಿ, ಓಕೇನ ಮಗ? ಅಷ್ಟೇ ಮಗ ಮಲಿಕ್ಕೊ. ಏನಾದ್ರೂ ಬೇಕಂದ್ರೆ ಹೇಳೋ ಲೈ. ನೀನ್ ನನ್ ತಮ್ಮ ತರ ಮಗ. ಮಗ ಲೈ, ಹೆಲ್ಮೆಟ್! ಮರಿ ಬೇಡ ಮಗ."


ಇದನ್ನು ಪಕ್ಕದಲ್ಲೇ ಕೂತು ಕೇಳಿಸಿಕೊಳ್ಳುತ್ತಿದ್ದ ಬಸ್ಯ "ಒಂದ್ ಇರುವೆ ಸಾಯಿಸಿಲ್ಲ ಇಲ್ಲಿ ತನಕ, ಹೋಗ್ಲಿ ಬಿಡು ಒಂದ್ ನಾಯಿಗೂ ಕುರುಪ್ ಹಾಕ್ದೀರಾನೇ ಇವ್ನಿಗೆ ಇವ್ನೆ ಕುರೂಪ್ ಅಂತ prefix ಹಾಕೊಂಡ್ಬಿಟ್ಟಿದ್ದಾನಲ್ಲ? ಇವ್ನ ಇವ್ನೆ ಎನ್ ಅಂಕೊಂಡಿದ್ದಾನೆ ಅಂತ? ಲೈ. ಎಲ್.ಕೆ.ಬಿ. ಏನೋ ಅವ್ನ ಎತ್ ಬಿಡ್ತೀನಿ ಇವ್ನ ಎತ್ ಬಿಡ್ತೀನಿ ಅಂತೀದೀಯಲ್ಲ. ಅವ್ಳೆನ್ ನಿನ್ನ ಪ್ರೀತಿಸ್ತಿದ್ದಾಳೇನೋ? ಹೋಗ್ಲಿ ಅವಳ್ನ ಒಂದ್ ಸಲ ಆದ್ರೂ ಮಾತಾಡ್ಸಿದ್ದಿಯಾ? ಈ ಸಿಲ್ಲಿ ರೀಸನ್ ಗೆಲ್ಲಾ ಜೈಲ್ಗೆ ಹೋಗ್ಬೇಡ ಮಗ. ದೊಡ್ಡದ್ದು ಏನಾದ್ರೂ ಮಾಡು. ನಿನ್ ಹುಡ್ಗಿ ಕಥೆ ಬಿಡು."


ಕೃಷ್ಣ ಕಾಲ್ ಕಟ್ ಮಾಡದೇನೆ "ಹೂಂ ಮಗ ನೀನ್ ಹೇಳೋದು ಕರೆಕ್ಟ್. ಆದ್ರೂ ಮಗ ಅವಳಂದ್ರೆ ನನಗೆ ಜೀವ ಇದ್ಹಾಗೆ ಮಗ. ಅವಳು, ನನ್ ಬೈಕ್ ಮೇಲೆ ತಾನೇ ಕೂತ್ಕೋಬೇಕು. ಅವ್ನ್ ಯಾವನೋ ಜೊತೆ ಮನೆ ತನಕ ಡ್ರಾಪ್ ಮಾಡಕೊಂಡಿದ್ದಾಳಲ್ಲ. ಅದ್ಕೆ ಮಗ ಉರಿತಿರೋದು ನನಗೆ. ಲೈ... ರಂಗ.. ಇದ್ದಿಯೇನೋ.. ಲೈ ರೇಜರ್.. ಮಲಗ್ಬಿಟ್ಟಾ? ನಾಳೆ ಬಾರೋ ಮಗ. ಮಿಸ್ ಕಾಲ್ ಕೊಡ್ತೀನಿ.. ಗೂಡ್ ನೈಟ್ ಮಗ."


"ನನಗೇನೋ ಈ ಡೀಲ್ ಬೇಡ ಅನ್ಸುತ್ತೆ. ಅವ್ಳ ಮನೆ ಮುಂದೆ ಹೋಗಿ ಇವಾಗ್ಲೆ ಪ್ರಪೋಸ್ ಮಾಡ್ಬಿಡು ಮಗ. ಇಷ್ಟ ಇದ್ರೆ ಹೂ ಅಂತಾಳೆ, ಇಲ್ಲಾಂದ್ರೆ ಅವ್ಳ್ನ ಎತ್ಹಾಕೋಂಡ್ ತಿರುಪತಿಗೆ ಡೈರೆಕ್ಟ್ ಆಗಿ ಹೋಗಣ. ಒಂದ್ ಮಂಗಳಸೂತ್ರ ಇಟ್ಕೋ. ಅಲ್ಲೆ ಮದ್ವೆ ಮಾಡ್ಕೋ. ಹೆಂಗೆ ಐಡಿಯಾ?" ಎಂದ ಬಸ್ಯ.


ಕೃಷ್ಣಾ: ಒಳ್ಳೆ ಐಡಿಯಾ ಮಗ. ಆದ್ರೆ, ನನ್ ಸ್ಪ್ಲೆಂಡರ್ ಮೇಲೆ ಅವ್ಳ್ನ ಹೆಂಗೋ ಎತ್ಹಾಕೋಂಡ್ ಹೋಗೊದು?


ಬಸ್ಯ: ಥು ಲೊಪರ್! ಕಾರ್ ಅಲ್ಲಿ ಎತ್ಹಾಕೋಂಡ್ ಹೋಗಣ ಮಗ.


ಕೃಷ್ಣ: ಕಾರ್ ಎಲ್ಲೋ ಇದೆ?


ಬಸ್ಯ: ಓಲ ಬುಕ್ ಮಾಡನ ಮಗ. ನಾನು ಹೊರಗೆ ನಿಂತಿರ್ತಿನಿ. ನೀನು ಅವಳ ಮನೆಗ್ ಹೋಗಿ, ಅವಳ ಕೈ ಕಟ್ಟಿ ಬಾಯಿಗೆ ಕರ್ಚೀಪ್ ಹಾಕಿದ್ ತಕ್ಷಣ ನನಗೆ ಮಿಸ್ ಕಾಲ್ ಕೊಡು. ನಾನು ಓಲಾ ಬುಕ್ ಮಾಡ್ತಿನಿ. ನೀನ್ ಅವ್ಳ್ನ ಎತ್ಹಾಕೋಂಡ್ ಬರಬೇಕಾದರೆ ನಾನು ಅಷ್ಟ್ರಲ್ಲಿ ಡ್ರೈವರ್ಗೆ ಸುಳ್ಳು ಹೇಳಿ ಸೆಟ್ ಮಾಡಿರ್ತಿನಿ.


ಕೃಷ್ಣ: ಮಚ್ಚಾ! ಇನ್ನೋವಾ ಬುಕ್ ಮಾಡೋ. ಮಲಿಕ್ಕೊಂಡ್ ಹೋಗಣ. ಆದ್ರೂ ಏನೇ ಹೇಳು ಮಗ ಅವ್ಳು ನನಗೆ ಒಂದ್ಥರ ಜೀವ ಇದ್ಹಾಗೆ ಮಗ.


ಬಸ್ಯ: ಇನ್ನೋವಾ ಕಾಸ್ಟ್ಲಿ ಮಗ. Ok ನಿನಗೋಸ್ಕರ ಅದ್ನೆ ಮಾಡನ ತಗೋ. ಆದ್ರೆ ದುಡ್ಡು?


ಕೃಷ್ಣ: ಮಗ ನನ್ ಹತ್ರ ಅಷ್ಟೊಂದ್ ಇಲ್ಲ. ಆದ್ರೆ ಒಂದ್ ಐಡಿಯಾ ಇದೆ. ಹಿಂಗೆ ಹಿಂದೆ ನಡ್ಕೊಂಡ್ ಹೋದ್ರೆ ಇಸ್ಕಾನ್ ಸಿಗುತ್ತೆ. ಅವ್ರ ಹತ್ರ ದೊಡ್ ಹುಂಡಿನೆ ಇದೆ. ಅದ್ನೇ ಎತ್ಹಾಕೋಂಡ್ ಓಡೋಗಣ. ಫುಲ್ ಲೈಫ್ ಸೆಟ್ಲ್ ಆಗ್ಬಿಡುತ್ತೆ.


ಬಸ್ಯ: ಹಂಗಾದ್ರೆ ನಿನ್ ಹೆಸ್ರು ಕುರೂಪ್ ಕೃಷ್ಣ ಬದ್ಲು ಕಳ್ ಕೃಷ್ಣ ಅಂತ ಚೇಂಜ್ ಮಾಡ್ಕೋ. ಹೆಂಗು ಕೃಷ್ಣನ್ ದೇವಸ್ಥಾನದಲ್ಲಿ ದುಡ್ ಎತ್ಕೊಂಡು ನಿನ್ ರಾಧೆನ ಮದ್ವೆ ಆಗೋ ಕನಸು ಕಾಣ್ತಿದ್ದೀಯಾ. ದೇವ್ರೇನು ನಿನ್ಮೇಲೆ ಕೋಪ ಮಾಡ್ಕೊಳ್ಳಲ್ಲ ಬಿಡು.


ಕೃಷ್ಣ: ಅವಳ ಹೆಸ್ರು ರಾಧಾನ ಮಗ? ನಿನಗೆ ಹೆಂಗೋ ಗೊತ್ತಾಯ್ತು?


ಬಸ್ಯ: ಮಗ. ನೀನ್ ಮದುವೆ ಆಗ್ತಿಯ ಅಂದ್ರೆ ಅವ್ಳು ಹೆಸ್ರು ರುಕ್ಮಿಣೀ ನೇ ಆಗಿರ್ಬೇಕು.


ಕೃಷ್ಣ: ನಿಜ, ಅವ್ಳು ರಾಧೆನೋ ರುಕ್ಮಿಣಿನೋ ಗೊತ್ತಿಲ್ಲ. ಆದ್ರೆ ಅವ್ಳು ನನಗೆ ಒಂದ್ ಥರ ಜೀವ ಇದ್ಹಾಗೆ ಮಗ.


ಬಸ್ಯ: ಮಗ ಟೈಮ್ ಎಷ್ಟಾಯಿತು ನೋಡೋ. ಬೆಳ್ಳಗೆ 6 ಗಂಟೆಗೆ ರಂಗನ ಎಬ್ಸ್ ಬೇಕಲ್ಲೊ.


ಕೃಷ್ಣ: ಈಗ ತಾನೇ ಹೇಳ್ದೆ ಅವಳ ಮನೆಗೆ ಹೋಗಿ ಅವಳನ್ನ ಎತ್ಹಾಕೋಂಡ್ ಹೋಗಣ ಅಂತ. ಬಾ ಮಗ ಅದೇ ಒಳ್ಳೆ ಐಡಿಯಾ. ರಂಗ ಇಷ್ಟ್ ಹೊತ್ಗೆ ಮಲಗಿರ್ತಾನೆ. ಎರಡು ಕಾಲ್ ಮಗ.


ಬಸ್ಯ: ಎರಡೇ ಕಾಲ್ ಇರೋದು ಲೈ! ಕುಡ್ದಿದ್ದೀಯೇನೋ ಲೋಫರ್.


ಕೃಷ್ಣಾ: ಟೈಮ್ ಹೇಳ್ದೆ ಕಣೋ. ಟೂ ಫಿಫ್ಟೀನ್! ಬಾ ಹೋಗಣ. ಅವ್ಳುನು ಇಷ್ಟ್ ಹೊತ್ಗೆ ಮಲಗಿರ್ತಾಳಲ್ಲೋ.


ಬಸ್ಯ: ಅವ್ಳ್ ಮನೆಗೆ ಯಾಕೋ ಹೋಗ್ಬೇಕು ಈಗ. ನೀನ್ ನಿಮ್ ಮನೆಗ್ ಹೋಗು. ನಾನ್ ನಮ್ ಮನೆಗ್ ಹೋಗ್ತೀನಿ.


ಕೃಷ್ಣ: ಮತ್ತೆ ಮದ್ವೆ, ತಿರುಪತಿ ಎಲ್ಲಾ?


ಬಸ್ಯ: ಅದ್ಕೆಲ್ಲ ಸಿಕ್ಕಾಪಟ್ಟೆ ಪ್ಲಾನ್ ಮಾಡ್ಬೇಕು ನಾಳೆ ಸಂಜೆ ಸಿಗು. ಬಿಯರ್ ಬದ್ಲು ವಿಸ್ಕಿ ಒಡ್ಯನ. ಒಳ್ಳೆ ಐಡಿಯಾ ಬರುತ್ತೆ.


ಕೃಷ್ಣ: ಹೆಂಗೆ ಮಗ ನಿನಗೆ ಈತರ ಎಲ್ಲಾ ಐಡಿಯಾ ಬರುತ್ತೆ? ಬಾ ಒಂದ್ ಧಮ್ ಒಡ್ಕೊಂಡ್ ಹೋಗಣ.


ಬಸ್ಯ: ಧಮ್ ಇದೆ ಮಗ ನನಗೆ. ನೀನು ನಾಳೆ ಫಿಸ್ ಮಾಡ್ಕೊ. ಫುಲ್ ರೆಡಿ ಆಗಿರು. ಆದ್ರೆ ಏನೇ ಹೇಳು ಮಗ, ಆಕಾಶದಲ್ಲಿ ನಕ್ಷತ್ರಗಳೇ ಕಾಣಿಸ್ತಿಲ್ಲ. ಯಾಕೋ ಹಿಂಗೆ?


ಕೃಷ್ಣ: ಪೊಲ್ಲ್ಯೂಷನ್ ಮಗ ಪೊಲ್ಲ್ಯೂಷನ್.


ಬಸ್ಯ: ಇಲ್ಲ ಲೈ. ಕತ್ತಲಾಗಿದೆ ಅದ್ಕೆ ಕಾಣಿಸ್ತಿಲ್ಲ. ಲೈಟ್ ಇದ್ದಿದ್ರೆ ನೋಡಬಹುದಿತ್ತು.


ಕೃಷ್ಣ: ಗುಬಾಲ್! ಕುಡ್ದಿದ್ದೀಯೇನೋ? ಆಕಾಶಕ್ಕೆ ಲೈಟ್ ಹೆಂಗೋ ಹಾಕ್ತಿಯ. ಬೆಳ್ಗೆ ಸೂರ್ಯ ಬಂದ್ಮೇಲೆ ನೋಡು ಕಾಣ್ಸುತ್ತೆ.


ಬಸ್ಯ: ಒಕೆ ಮಗ. ಮನೆ ಬಂತು. ಗುಡ್ ನೈಟ್!


ಕೃಷ್ಣ: ಗುಡ್ ನೈಟ್ ಮಗ. ಲೈ ಇರೋ. ಏನೇ ಹೇಳು ಮಗ ಅವ್ಳು ನನಗೆ ಒಂದ್ ಥರ ಜೀವ ಇದ್ಹಾಗೆ ಮಗ. ಓಕೆ ಟಾಟಾಗು ಬೈ ಬೈ. ಬಿರ್ಲಾ ಗೂ ಬೈ ಬೈ.

 
 
 

Comments


bottom of page